Description:ಸತ್ಯವೇದದ ಮೂಲಕವಾಗಿ ದೇವರ ರಾಜ್ಯವು ಒಂದು ಪ್ರಮುಖ ವಿಷಯವಾಗಿದೆ. ಯೇಸುವು ಆತನ ಭೂ ಲೋಕದ ಸೇವೆಯನ್ನು ಪರಲೋಕ ರಾಜ್ಯದ ಆಗಮನದ ಕುರಿತು ಸಾರುವ ಮುಖಾಂತರ ಆರಂಭಿಸಿದನು. ಆತನ ಸ್ವರ್ಗಾರೋಹಣಕ್ಕೆ ಮೊದಲೂ ಆತನ ಅಂತಿಮ ದಿವಸಗಳ ಅವಧಿಯಲ್ಲಿ, ದೇವರ ರಾಜ್ಯದ ಕುರಿತು ಆತನು ಉಪದೇಶಿಸಿದನು. ದೇವರ ರಾಜ್ಯವು ನಮ್ಮೊಳಗೆ ಇದೆ ಎಂಬುದನ್ನು ತಿಳಿಯಬೇಕು. ಈ ಲೋಕಕ್ಕೆ ಒಳ್ಳೆಯ ಬೀಜಗಳಾಗಿ ಬಿತ್ತಲ್ಪಟ್ಟಂತಹ ದೇವರ ರಾಜ್ಯದ ಪುತ್ರರು ಮತ್ತು ಪುತ್ರಿಯರು ನಾವಾಗಿದ್ದೇವೆಂಬುದನ್ನು ನಾವು ಗುರುತಿಸಬೇಕು.