Description:ನಮ್ಮಲ್ಲಿ ಹಲವರು ತಂದೆತಾಯಂದಿರಾಗಿ, ಮಕ್ಕಳನ್ನು ಬೆಳೆಸುವಾಗ ಹೆಚ್ಚಾದ ಪ್ರೀತಿಯನ್ನು ಅವರಿಗೆ ತೋರಿಸುತ್ತಾರೆ. ಆದಾಗ್ಯೂ ಕೆಲವು ಸಮಯಗಳಲ್ಲಿ ಏಟುಗಳನ್ನು ಸಹ ಕೊಡುತ್ತೇವೆ! ಇದು ನಮ್ಮ ಮಕ್ಕಳನ್ನು ನಾವು ದ್ವೇಷಿಸುತ್ತೇವೆ ಎಂಬುದಾಗಿ ಅರ್ಥವಲ್ಲ, ಆದರೆ ಅವರನ್ನು ಪ್ರಬಲರನ್ನಾಗಿ ಎಬ್ಬಿಸಬೇಕೆಂದು ನಮ್ಮ ಅಪೇಕ್ಷೆಯಾಗಿರುತ್ತದೆ. ಅದೇ ರೀತಿಯಾಗಿ ಸಭೆಯಲ್ಲಿ ಪ್ರಬಲ ಜನರನ್ನು ಎಬ್ಬಿಸಬೇಕೆಂಬುದಾಗಿ ನಾವು ಅಪೇಕ್ಷಿಸುವಾಗ, ದೇವರ ನಿವಾಸದಲ್ಲಿ ಅವರು ಮಾಡಬೇಕಾದುದು ಏನೆಂಬುದಾಗಿ ಬೋಧಿಸುವುದು ಅಗತ್ಯವಾಗಿದೆ.
ದುರಾದೃಷ್ಟಕರವಾಗಿ, ಇಂತಹ ವಿಷಯಗಳ ಬಗ್ಗೆ ಅಧಿಕವಾದ ಬೋಧನೆಗಳಿಲ್ಲ ಮತ್ತು ಪ್ರತಿಯೊಬ್ಬನು, ತಾನು ಯಾವುದು ಸರಿ ಎಂಬುದಾಗಿ ಯೋಚಿಸುತ್ತಾನೋ ಅದನ್ನೇ ಮಾಡುತಿದ್ದಾನೆ. ಸಭೆಯಲ್ಲಿರುವ ಜನರು ತಮ್ಮ ಮನಸ್ಸುಗಳಲ್ಲಿರುವುದನ್ನೇ ಮಾಡುತಿದ್ದಾರೆ ಮತ್ತು ಸಭೆಯನ್ನು ಭಿನ್ನವಾದ ದಿಕ್ಕುಗಳೆಡೆಗೆ ಸೆಳೆಯುತ್ತಾರೆ, ಹೀಗಾಗಿ ಸಭೆಯು ಎತ್ತ ಕಡೆಗೂ ಹೋಗಲಾರದು! ಪ್ರತಿಯೊಬ್ಬರು, ಅವನು ಅಥವ ಅವಳು ಸರಿ ಎಂಬುದಾಗಿ ಆಲೋಚಿಸುವುದನ್ನು ಮಾಡುತ್ತಿದ್ದರೆ ನಿವಾಸದ ತುಂಬಾ ಗಲಿಬಿಲಿ ಮತ್ತು ಗೊಂದಲಗಳಿರುತ್ತವೆ. ಆದರೆ ದೇವರು ಗೊಂದಲಗಳ ಕರ್ತೃವಲ್ಲ. ಪ್ರಬಲ ಸಭೆಯನ್ನು ಕಟ್ಟುವ, ಮತ್ತು ಇದರಿಂದ ಪ್ರಬಲ ಜನರನ್ನು ಎಬ್ಬಿಸುವ ಇಚ್ಚೆಯೊಡನೆ, ನನ್ನ ಹೃದಯಲ್ಲಿರುವ ಪ್ರೇರಣೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬುದಾಗಿ ನಂಬಿ ಈ ಪುಸ್ತಕದ ಮೂಲಕ "ನಿಮ್ಮ ಸಭಾಪಾಲಕರಿಗೆ ಹ