Description:ನಾವು ವಿಶ್ವಾಸಿಗಳನ್ನು ಸಜ್ಜುಗೊಳಿಸಿ ಪರಿಪೂರ್ಣತೆಗೆ ನಡೆಸಿ ಅವರನ್ನು ಲೋಕದೊಳಗಿರುವ ಮನೆಗಳಿಗೆ, ಸಂಘ ಸಂಸ್ಥೆಗಳಿಗೆ ವಿಧ್ಯಾಸಂಸ್ಥೆಗಳಿಗೆ, ನೌಕರವರ್ಗಗಳ ಕಡೆಗೆ ಬಿಡುಗಡೆಗೊಳಿಸುವ ಸಮಯದಲ್ಲಿದ್ದೇವೆ.
ವಿಶ್ವಾಸಿಗಳ ಮೂಲಕ ಯೇಸುಕ್ರಿಸ್ತನ ಕಾರ್ಯಗಳು ನಡೆಯುವಂತೆ; ಅಪೋಲಸ್ತಲರ ಅಧಿಕಾರದಲ್ಲಿ ಚಲಿಸುವಂತೆ, ಕರ್ತನ ಪ್ರವಾದಿತ ವಾಕ್ಯಗಳನ್ನು ಪ್ರಕಟಿಸುವಂತೆ, ಅಧ್ಬುತ ಕಾರ್ಯಗಳನ್ನು ಮಾಡುವಂತೆ ಮತ್ತು ಕ್ರಿಸ್ತನ ಸುವಾರ್ತೆಯ ಮೂಲಕ ಅನೇಕರ ಜೀವಿತಗಳು ಬದಲಾವಣೆ ಹೊಂದಲು ಪ್ರಭಾವಿಸುವಂತೆ ವಿಶ್ವಾಸಿಗಳಿಗೆ ತರಬೇತಿ ನೀಡುವುದು ಅಗತ್ಯವಾಗಿದೆ.
ಸೇವಕಾರ್ಯವು ಕೇವಲ ನಾಯಕರುಗಳಿಗೆ ಸೀಮಿತವೆಂದು ವಿಶ್ವಾಸಿಗಳು ಸುಖವಾಗಿ ಕುಳಿತುಗಕೊಳ್ಳುವುದಕ್ಕೆ ಇದು ಸಮಯವಲ್ಲ. ಭೂಮಿಯಮೇಲೆ ದೇವರ ಚಿತ್ತವನ್ನು ನೆರವೇರಿಸಲು ಎಲ್ಲಾ ದೇವ ಜನರು ಬಲಹೊಂದುವಂತದ್ದು ಪ್ರತಿ ಕ್ರೈಸ್ತ ಸೇವಕನ ಜವಬ್ದಾರಿಯಾಗಿದೆ. ಸೇವಕರುಗಳಾದ ಇದು ನಮ್ಮ ಬಗ್ಗೆಯಲ್ಲ, ಆದರೆ ಇದು ದೈವ ಜನರಾದ ವಿಶ್ವಾಸಿಗಳ ಬಗ್ಗೆ.
ಪ್ರತಿ ದೈವ ಮಗುವನ್ನು ದೈವ ಸೇವಕನನ್ನಾಗಿ ಸನ್ನದಗೊಳಿಸಿ ಬಿಡುಗಡೆಗೊಳಿಸುವುದರ ಬಗ್ಗೆ ಕಲಿತುಕೊಂಡು ಕೇಂದ್ರೀಯವಾದ ದೇವರ ಹೊಸ ತಿರುವಿನಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಕ್ರಿಸ್ತನು ಯಾವುದೇ ದೋಷವಿಲ್ಲದ, ಕಳಂಕವಿಲ್ಲದ ಮತ್ತು ಬಲವಾದ ದೇಹವೆಂಬ ಸಭೆಗೆ ಪ್ರತ್ಯಕ್ಷನಾಗಲಿದ್ದಾನೆ.