Description:ನಮ್ಮಲ್ಲಿ ಪ್ರತಿಯೊಬ್ಬರಿಗಾಗಿ ದೇವರು ಒಂದು ಯೋಜನೆ ಮತ್ತು ಉದ್ದೇಶ ಹೊಂದಿದ್ದಾನೆ. ನಮ್ಮ ಜೀವಿತಕ್ಕಿರುವ ಆತನ ಉದ್ದೇಶವನ್ನು ನೆರವೇರಿಸಲು ನಾವು ಆತನೊಂದಿಗೆ ಸಹಕರಿಸಬೇಕು. ಈ ಅಧ್ಯನವು ನಿಮ್ಮ ಜೀವಿತಕ್ಕಿರುವ ದೇವರ ಉದ್ದೇಶವನ್ನು ಹೇಗೆ ಗುರುತಿಸುವುದು ಮತ್ತು ಆತನು ನಮಗಾಗಿ ಯೋಜನೆ ಮಾಡಿರುವುಗಳನ್ನು ಪೂರ್ಣವಾಗಿ ಸಫಲ ಮಾಡಲು ನಾವು ಏನು ಮಾಡುವುದು ಅವಶ್ಯ ಎಂಬುದನ್ನು ಭೋದಿಸುತ್ತದೆ. ನಿಮ್ಮ ಜೀವಿತಕ್ಕಿರುವ ದೇವರ ಕನಸನ್ನು ಹಿಡಿಯಿರಿ! ನಿಮ್ಮ ಜೀವಿತಕ್ಕಿರುವ ದೇವರ ಉದ್ದೇಶದಲ್ಲಿ ಜೀವಿಸುವುದಕ್ಕಿಂತ ಉತ್ತಮವಾದ ಅಥವಾ ದೊಡ್ಡದಾದ ಉದ್ದೇಶ ಇನ್ನೊಂದಿಲ್ಲ! ಆತನ ಪರಲೋಕದ ಕರೆಯನ್ನು ಹಿಂಬಾಲಿಸುವುದು ಮತ್ತು ನೆರವೇರಿಸುವುದರಲ್ಲಿ ಇರುವ ಸಂತೃಪ್ತಿಯನ್ನು ಬೇರೆ ಯಾವುದೂ ತರಲಾರದು.
ಆತನು ನಿಮಗಾಗಿ ಸಂಕಲ್ಪಿಸಿರುವ ವಿಶಯಗಳನ್ನು ನೆರವೇರಿಸಲು ದೇವರೊಂದಿಗೆ ನಡೆಯುವುದಕ್ಕಿಂತಲೂ ದೊಡ್ಡದಾದ ಸಾಹಸ ಕಾರ್ಯ ಇನ್ನಾವುದೂ ಇಲ್ಲ.
ನಿಮ್ಮ ಜೀವಿತಕ್ಕಿರುವ ದೇವರ ಕನಸನ್ನು ಪಾಲಿಸುವುದರೊಂದಿಗೆ ನಿಮ್ಮ ಪ್ರಯಾಣವನ್ನು ಆನಂದಿಸಿರಿ!